ಚಿತ್ರ: ಟೋನಿ
ಸಾಹಿತ್ಯ: ದೊಡ್ಡರಂಗೇಗೌಡ
ಗಾಯಕರು: ಎಸ್.ಪಿ.ಬಾಲಸುಬ್ರಮ್ಹಣ್ಯಂ ಮತ್ತು ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ

ಆನಂದವೇ ಮೈ ತುಂಬಿದೇ ಆಕಾಶಕೇ ಕೈ ಚಾಚಿದೇ
ಸನಿಹದಲೀ ನೀನಿರಲೂ ಏನೊಂದೂ ಕಾಣದೇ  ||2||   ||ಪಲ್ಲವಿ||

ಕಣ್ಣೋಟ ಬಲೆಬೀಸೀ ಮನವಾ ಸೆಳೆದಿದೇ
ಮೋಹ ಮೂಡಿಸೀ ಎಲ್ಲೇ ದಾಟಿದೇ
ಚೆಲ್ಲಾಟ ಜಿಗಿದಾಡಿ ಚಲುವಾ ಚಲ್ಲಿದೇ
ಆಸೇ ಅರಳಿಸೀ ಪ್ರೀತೀ ಬೆಳೆಸಿದೇ
ಹೃದಯಗೀತೆ ಹಾಡಿದೇ         ||ಆನಂದವೇ||

ನಿನ್ನಪ್ಪೀ ನಲಿವಾಗಾ ನನ್ನೇ ಮರೆಸಿದೇ
ಸ್ನೇಹಾ ಎಂದಿಗೂ ಒಂದೇ ಆಗಿದೇ
ನಿನ್ನನ್ನೂ ನೆನೆದಾಗಾ ಜೀವಾ ಮಿಡಿದಿದೇ
ಹಿಂದೇ ಸರಿಯದೇ ಎಂದೂ ಮರೆಯದೇ
ಹೃದಯಗೀತೆ ಹಾಡಿದೇ         ||ಆನಂದವೇ||

category: ಕನ್ನಡ ಚಿತ್ರಸಾಹಿತ್ಯ
category: ಟೋನಿ ಚಿತ್ರ
category: ದೊಡ್ಡರಂಗೇಗೌಡ ಸಾಹಿತ್ಯ
category: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ
category: ಎಸ್.ಜಾನಕಿ ಗಾಯನ